ಕರ್ನಾಟಕ ಚುನಾವಣೆಗೆ "ಮುಹೂರ್ತ ಫಿಕ್ಸ್"
- Mar 28, 2018
- 1 min read

- 4.96 ಕೋಟಿ ಮತದಾರರಿಗೆ ಮತ ಹಾಕುವ ಹಕ್ಕು! - ಈ ಸಲ ಮಿಷನ್, ಪೇಪರ್ ಎರಡೂ ಇರುತ್ತೆ..! - ಪ್ರಚಾರಕ್ಕೆ ಲೌಡ್ ಸ್ಪೀಕರ್, ಪ್ಲಾಸ್ಟಿಕ್ ಬಳಸುವಂತಿಲ್ಲ ಬೆಂಗಳೂರು: ರಾಜ್ಯದಲ್ಲಿ ಮೇ 12ಕ್ಕೆ ನಡೆಯುವ ಮತದಾನಕ್ಕೆ ದಿನಗಣನೆ ಆರಮಭವಾಗಿದೆ. ಈ ನಡುವೆ 4.96 ಕೋಟಿ ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ವೋಟಿಂಗ್ ಮಿಷನ್ ಮತ್ತು ಬರೆಯುವ ಬ್ಯಾಲೇಟ್ ಪೇಪರ್ ಬಳಸಲಾಗುತ್ತದೆ. ಚುನಾವಣೆಗೆ ಲೌಡ್ ಸ್ಪೀಕರ್ ಬಳಸುವ ಹಾಗಿಲ್ಲ. ಪ್ಲಾಸ್ಟಿಕ್ ಬಳಸುವ ಹಾಗಿಲ್ಲ.ಕರ್ನಾಟಕ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಯಾವತ್ತು? ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಮಾ.27ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ರಾಜಕೀಯ ಬಿಸಿ ಜೋರಾಗಲಿದೆ. ಯಾವತ್ತು? ಏನು?: ಮೇ-12 ಮತದಾನ, ಮೇ-15 ಫಲಿತಾಂಶ ಮಾರ್ಚ್ 27 - ನೀತಿ ಸಂಹಿತೆ ಜಾರಿ ಏಪ್ರಿಲ್ 17 - ಚುನಾವಣಾ ಅಧಿಸೂಚನೆ ಪ್ರಕಟ ಏಪ್ರಿಲ್ 24 - ನಾಮಪತ್ರ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 26 - ನಾಮಪತ್ರಗಳ ಪರಿಶೀಲನೆ ಏಪ್ರಿಲ್ 27 - ನಾಮಪತ್ರ ಹಿಂಪಡೆಯಲು ಕೊನೆ ದಿನ ಮೇ 12 - ಮತದಾನ ಮೇ 15 - ಮತ ಎಣಿಕೆ 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 4.96 ಕೋಟಿ ಮತದಾರರು ಮತದಾನ ಮಾಡಲು ಸಿದ್ಧರಾಗಬೇಕಿದೆ. ರಾಜಕೀಯ ಪಕ್ಷಗಳ ಖರ್ಚಿಗೆ ಯಾವುದೇ ಮಿತಿ ವಿಧಿಸಿಲ್ಲ. ಆದರೆ ಅಭ್ಯರ್ಥಿಗಳ ಖರ್ಚಿಗೆ ಇಪ್ಪತ್ತೆಂಟು ಲಕ್ಷ ರುಪಾಯಿ ಮಿತಿ ವಿಧಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ 51 ಲಕ್ಷ ಹೊಸ ಮತದಾರರು ಸೇರಿದ್ದಾರೆ. ಮತದಾನಕ್ಕಾಗಿ 56,696 ಮತಗಟ್ಟೆಗಳು ಸ್ಥಾಪನೆ ಮಾಡಲಾಗುವುದು. 224 ಕ್ಷೇತ್ರಗಳಲ್ಲಿ ಇನ್ನು ಅಭ್ಯರ್ಥಿಗಳ ಫೈನಲ್ ಪಟ್ಟಿ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ.




Comments