top of page

ಜಿಲ್ಲೆಯಲ್ಲಿ ‌ಕಾಡಾನೆಗಳ ಹಾವಳಿಗೆ ಕಂಗೆಟ್ಟ ಜನ

  • Mar 28, 2018
  • 1 min read

- ರಾತ್ರಿ ಗ್ರಾಮದೊಳಗೆ ರಾಜಾರೋಷದ ವಿಹಾರ - ಸಕಲೇಶಪುರ ತಾಲೂಕಿನ ಹೆಗ್ಗರವಳ್ಳಿ,ಹುರುಡಿ‌ ಗ್ರಾಮದಲ್ಲಿ ಓಡಾಡಿರೊ ಒಂಟಿ‌ ಸಲಗ - ಗ್ರಾಮದ ಮೂರ್ತಿ ಎಂಬುವವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಆನೆ ಸಂಚಾರ ಸೆರೆ - ರಾತ್ರಿ 11 ಗಂಟೆಗೇ ಗ್ರಾಮಕ್ಕೆ ನುಗ್ಗಿರೊ ಕಾಡಾನೆ ತಪ್ಪಿದ ಅನಾಹುತ - ಆನೆಯ ಸಂಚಾರದಿಂದ ಭಯಭೀತಗೊಂಡ ಜನರು - ಆನೆ ಪತ್ತೆಹಚ್ಚಿ ಕಾಡಿಗಟ್ಟಲು ಜನರ ಒತ್ತಾಯ

ಹಾಸನ: ಬೇಸಿಗೆ ಆಗಮನದೊಂದಿಗೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯೂ ಅಧಿಕಗೊಳ್ಳುವುದು ಸಾಮಾನ್ಯವಾಗಿದೆ. ಸೋಮವಾರ ರಾತ್ರಿ ಸಕಲೇಶಪುರ ಪಟ್ಟಣದೊಳಗೆ ಓಡಾಡಿ ಓರ್ವ ಕುರಿಗಾಹಿಯನ್ನು ಗಾಯಗೊಳಿಸಿದ್ದ ಕಾಡಾನೆ ಮಂಗಳವಾರ ರಾತ್ರಿ ಸಕಲೇಶಪುರ ತಾಲೂಕಿನ ಹೆಗ್ಗರವಳ್ಳಿ, ಹುರುಡಿ ಗ್ರಾಮದಲ್ಲಿ ಓಡಾಡಿದೆ. ರಾತ್ರಿ 11 ಗಂಟೆ ವೇಳೆಗೆ ಗ್ರಾಮದೊಳಗೆ ಆಗಮಿಸಿರುವ ಕಾಡಾನೆ ಆರಾಮವಾಗಿ ತಿರುಗಾಡಿದೆ. ಆಲೂರು, ಸಕಲೇಶಪುರ ಭಾಗದಲ್ಲಿ ನೀರು, ಆಹಾರ ಸಿಗುತ್ತಿದ್ದರಿಂದ ಈ ಮಾರ್ಗ ಆನೆ ಕಾರಿಡಾರ್ ಆಗಿದ್ದು ಆನೆಗಳ ಸಂಚಾರ ಸಾಮಾನ್ಯ ಆಗಿತ್ತು. ಈಗ ಇಲ್ಲಿ ಕೃಷಿ ಭೂಮಿ ಆಗಿರುವುದು ಅಂತರ್ಜಲ ಶೋಷಣೆಯಿಂದಾಗಿ ಹಳ್ಳ, ತೊರೆಗಳಲ್ಲಿ ನದಿಗಳಲ್ಲೂ ನೀರಿಲ್ಲದೆ ಇರುವುದರಿಂದ ಹಾಗೂ ಕಾಡಂಚಿನ ಜಮೀನುಗಳಲ್ಲಿ ಕೃಷಿ ಮಾಡದಿರುವುದರಿಂದ ಆನೆಗಳು ಗ್ರಾಮದೊಳಗೆ ಆಗಮಿಸುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page