top of page

ಡಿಸಿ ರೋಹಿಣಿ ವರ್ಗಾವಣೆ: ಇಂದು ಸಿಎಟಿ ವಿಚಾರಣೆ

  • Mar 13, 2018
  • 1 min read




ನಿಯಮಗಳನ್ನು ಪಾಲಿಸದೆ ಅವಧಿಗೆ ಮುನ್ನವೇ ವರ್ಗಾವಣೆ ಮಾಡಿರುವ ಸರಕಾರದ ಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೇಂದ್ರಿಯ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ. ವರ್ಗಾವಣೆ ಮಾಡಿದ ಸರಕಾರದ ಆದೇಶ ಪ್ರಶ್ನಿಸಿ ಸಿಎಟಿ(ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ)ಗೆ ಮಾ. 8ರಂದು ಮೊರೆ ಹೋಗಿದ್ದರು. ವರ್ಗಾವಣೆಗೆ ತಡೆ ನೀಡಿದ್ದ ಸಿಎಟಿಗೆ ಮಾ.13ರ ತನಕ ಜಿಲ್ಲಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಮುಚ್ಚಳಿಕೆ ನೀಡಿದ್ದರು. ನ್ಯಾಯಮೂರ್ತಿಗಳಾದ ಡಾ.ಕೆ.ಬಿ.ಸುರೇಶ್‌, ಪಿ.ಕೆ.ಪ್ರಧಾನ್‌ ಅವರಿದ್ದ ನ್ಯಾಯಪೀಠ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಮಾ.13ಕ್ಕೆ ನಿಗದಿಪಡಿಸಿತ್ತು. ರಾಜ್ಯ ಸರಕಾರ ಏಳು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಜ.22ರಂದು ಆದೇಶ ಹೊರಡಿಸಿತ್ತು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಕಾರಣ ಚುನಾವಣಾ ಆಯೋಗದ ಅನುಮತಿ ಇಲ್ಲದೆ ವರ್ಗಾವಣೆ ಮಾಡುವಂತಿಲ್ಲ ಎಂದು ವರ್ಗಾವಣೆ ಆದೇಶಕ್ಕೆ ಆಯೋಗ ತಡೆಯಾಜ್ಞೆ ನೀಡಿತ್ತು. ಡಿಸಿಗಳ ವರ್ಗಾವಣೆ ಆದೇಶವನ್ನು ಸರಕಾರ ಮಾ.6ರಂದು ಹಿಂಪಡೆದಿತ್ತು. ಅದರ ಬೆನ್ನಲ್ಲೇ ಮಾ.7ರಂದು ರೋಹಿಣಿ ಸಿಂಧೂರಿ ಸೇರಿದಂತೆ 12 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು

Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page