ತೆಂಗಿನ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ
- Mar 30, 2018
- 1 min read
ಬಾಣಾವರ: ಸಮೀಪದ ಟಿ.ಬಿ.ಕಾವಲ್ ಗ್ರಾಮದ ವೆಂಕಟೇಶ್ ನಾಯ್ಕ ಹಾಗೂ ಪರ್ವತಾ ನಾಯ್ಕ ಅವರಿಗೆ ಸೇರಿದ ತೆಂಗಿನ ತೋಟಕ್ಕೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಎಕರೆ ತೋಟ ಸಂಪೂರ್ಣ ಸುಟ್ಟು ಹೋಗಿದೆ. ತೋಟದಲ್ಲಿ 120 ತೆಂಗಿನ ಮರಗಳಿದ್ದವು. ತೋಟದಲ್ಲಿದ್ದ ಡ್ರಿಪ್ ಪೈಪ್‌ಗಳು, ಕೇಬಲ್ ವೈರ್‌ಗಳು, ಮೋಟರ್ ಸೇರಿದಂತೆ ವಿವಿಧ ವಸ್ತುಗಳು ಸಂಪೂರ್ಣ ನಾಶವಾಗಿ ₹ 2 ಲಕ್ಷದಷ್ಟು ಹಾನಿಯಾಗಿದೆ ಎಂದು ಮಾಲೀಕರು ತಿಳಿಸಿದರು.





Comments