ತಮ್ಮೂರಲ್ಲಿ ಬಸ್ ನಿಲ್ಲಿಸದಿದ್ದಕ್ಕೆ ಡ್ರೈವರ್ ಮೇಲೆ ಕತ್ತಿಯಿಂದ ಹಲ್ಲೆ
- Mar 29, 2018
- 1 min read


ತಮ್ಮೂರಲ್ಲಿ ಬಸ್ ನಿಲ್ಲಿಸದಿದ್ದಕ್ಕೆ ಡ್ರೈವರ್ ಮೇಲೆ ಕತ್ತಿಯಿಂದ ಹಲ್ಲೆ
ಹೊಳೆನರಸೀಪುರ: ತಮ್ಮೂರಿನ ಬಳಿ ಬಸ್ ನಿಲ್ಲಿಸದ್ದಕ್ಕೆ ಆಕ್ರೋಶಗೊಂಡ ಪ್ರಯಾಣಿಕನೊಬ್ಬ ಬಸ್ ಚಾಲಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ. ಸಿಐಎಸ್ಎಫ್ ಉದ್ಯೋಗಿಯಾಗಿರುವ ನಾಗರಾಜ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಬೆಂಗಳೂರಿನಿಂದ ಸೋಮವಾರಪೇಟೆಗೆ ಬರುತ್ತಿದ್ದ ಬಸ್ ನಲ್ಲಿ ಆರೋಪಿ ನಾಗರಾಜ್ ಪ್ರಯಾಣಿಸುತ್ತಿದ್ದು ಮೂಡಲಹಿಪ್ಪೆ ಬಳಿ ಬಸ್ ನಿಲ್ಲಿಸಲು ಕೋರಿದ್ದ. ಆದರೆ ಎಕ್ಸ್ಪ್ರೆಸ್ ಆಗಿರುವುದರಿಂದ ನಿಗದಿತ ಸ್ಟಾಪ್ ಕಾರಣ ನೀಡಿ ಚಾಲಕ ಹೊಳೆನರಸೀಪುರ ದವರೆಗೆ ಕರೆತಂದಿದ್ದ. ಇದರಿಂದ ಸಿಟ್ಟಿಗೆದ್ದ ನಾಗರಾಜ್ ಚಾಲಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಾಳು ಚಾಲಕ ಸದಾಶಿವಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೊಳೆನರಸೀಪುರ ಪಟ್ಟಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. @ Hole Narsipur, Karnataka, India




Comments