top of page

ಮಾ.27 ರಿಂದ ಮೇ.18 ರವರೆಗೆ ಶಸ್ತ್ರ/ಬಂದೂಕು ನಿಷೇಧ

  • Mar 28, 2018
  • 1 min read

ಮಾ.27 ರಿಂದ ಮೇ.18 ರವರೆಗೆ ಶಸ್ತ್ರ/ಬಂದೂಕು ನಿಷೇಧ ಹಾಸನ ಮಾ.28 ಹಾಸನ ಜಿಲ್ಲೆಯ ಚುನಾವಣೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲಾ ಶಸ್ತ್ರ/ಬಂದೂಕು ಪರವಾನಗಿದಾರರು ಬಂದೂಕು ಪರವಾನಗಿ ಆಧಾರದಲ್ಲಿ ಹೊಂದಿರುವ ಎಲ್ಲಾ ರೀತಿಯ ಶಸ್ತ್ರ/ ಬಂದೂಕುಗಳನ್ನು ಇಂದಿನಿಂದಲೇ ಜಾರಿಗೆ ಬರುವಂತೆ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದುಗುಂಡುಗಳ ವಹಿವಾಟುದಾರರಲ್ಲಿ ಠೇವಣಿ (ಆeಠಿosiಣ) ಇಡಲು ಹಾಗೂ ಹಾಸನ ಜಿಲ್ಲೆಯ ಚುನಾವಣಾ ಘೋಷಿತ ಯಾವುದೇ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ/ಬಂದೂಕುಗಳನ್ನು ಹೊಂದಿರುವುದನ್ನು ನಿಷೇದಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆದ ರೋಹಿಣಿ ಸಿಂಧೂರಿ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶವು ಮಾ.27 ರಿಂದ ಮೇ.18 ರವರೆಗೆ (ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ವರೆಗೆ) ಜಾರಿಯಲ್ಲಿರುತ್ತದೆ.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page