top of page

#ಮಹಾಮಸ್ತಕಾಭಿಷೇಕ ನಿಮಿತ್ತ ಕೈಗೊಂಡಿದ್ದ ಕಾಮಗಾರಿಗಳ ‘ಬಣ್ಣ’ವನ್ನು ಕೆಲವೇ ನಿಮಿಷಗಳ ಮಳೆ ಬಯಲು ಮಾಡಿದೆ.

  • Mar 16, 2018
  • 1 min read

#ಮಹಾಮಸ್ತಕಾಭಿಷೇಕ ನಿಮಿತ್ತ ಕೈಗೊಂಡಿದ್ದ ಕಾಮಗಾರಿಗಳ ‘ಬಣ್ಣ’ವನ್ನು ಕೆಲವೇ ನಿಮಿಷಗಳ ಮಳೆ ಬಯಲು ಮಾಡಿದೆ.

ಗುರುವಾರ ಸಂಜೆ ಸುರಿದ ಮಳೆಯಿಂದ ಶ್ರವಣಬೆಳಗೊಳ ರಸ್ತೆ ಹಾಗೂ ಬಸ್ ನಿಲ್ದಾಣದ ಒಳಗೆ ಚರಂಡಿ ನೀರು ಹರಿದು ಊರೆಲ್ಲ ಗಬ್ಬು ನಾರುವಂತಾಗಿದೆ. ಶಾಲಾ ಮಕ್ಕಳು ಹಾಗೂ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.

ತಿಂಗಳ ಹಿಂದಷ್ಟೇ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡಲಾಗಿತ್ತು. ಆದರೆ ಈ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿರುವುದನ್ನು ಮಳೆ ಸಾಬೀತುಪಡಿಸಿತು. ಇದರಿಂದ ಖರ್ಚು ಮಾಡಿದ್ದ ಕೋಟ್ಯಂತರ ರೂಪಾಯಿ ನೀರಿನಲ್ಲಿ ಕೊಚ್ಚಿ ಹೋದಂತಾಯಿತು.

2006 ರ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಚರಂಡಿ ನಿರ್ಮಾಣ ಮಾಡಿ, ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ 12 ವರ್ಷಗಳ ನಂತರ ಈ ಬಾರಿ ಅದೇ ಚರಂಡಿಗೆ ತರಾತುರಿಯಲ್ಲಿ ಸ್ಲ್ಯಾಬ್ ಹಾಕಿ, ಹೇಗೋ ಕಾಮಗಾರಿ ಮುಗಿಸಿದರೆ ಸಾಕೆಂದು ರಸ್ತೆ ನಿರ್ಮಾಣ ಮಾಡಿ ಕೈತೊಳೆದುಕೊಳ್ಳಲಾಗಿತ್ತು.ಎಂದು ಸ್ಥಳೀಯ ರು ಆರೋಪಿಸಿದ್ದಾರೆ.







Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page