top of page

ರಾಮನಾಥಪುರ: ಪಟ್ಟಣದಲ್ಲಿ ಪ್ರತಿ ನಿತ್ಯ ವಿದ್ಯುತ್‌ ಕಣ್ಣು ಮುಚ್ಚಾಲೆ ಆಟ ಆಡುತ್ತಿದೆ

  • Mar 17, 2018
  • 1 min read

ರಾಮನಾಥಪುರ: ಪಟ್ಟಣದಲ್ಲಿ ಪ್ರತಿ ನಿತ್ಯ ವಿದ್ಯುತ್‌ ಕಣ್ಣು ಮುಚ್ಚಾಲೆ ಆಟ ಆಡುತ್ತಿದೆ, ರಾಮನಾಥಪುರ ಪ್ರವಾಸಿ ಕೇಂದ್ರವಾಗಿದ್ದು 24 ಗಂಟೆ ನಿರಂತರದ ವಿದ್ಯುತ್‌ ವ್ಯವಸ್ಥೆ ಮಾಡುವಂತೆ ಜಿಪಂ ಮಾಜಿ ಸದಸ್ಯ ಎಚ್‌.ಎಸ್‌ ಶಂಕರ್‌ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋಬಳಿ, ಪಟ್ಟಣ ಸೇರಿದಂತೆ ಸುತ್ತಮುತ್ತ ಭಾಗಗಳ ಶಿರದನಹಳ್ಳಿ, ರಾಮನಕೊಪ್ಪಲು, ಉಪಾರಕೊಪ್ಪಲು, ಕೂಡಲೂರು ಮುಂತಾದ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್‌ ಸರಬರಾಜಾಗುತ್ತಿಲ್ಲ. ಬೀದಿ ದೀಪಗಳು, ಕುಡಿಯುವ ನೀರಿನ ಸ್ಥಾವರಗಳು ಹಾಗೂ ಇನ್ನಿತರ ಸಾರ್ವಜನಿಕರ ಸಮಸ್ಯೆಗಳಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದರು. ರೈತರು ಹೇಗಾದರು ಮಾಡಿ ಒಂದು ಬೋರ್‌ವೆಲ್‌ ಕೊರೆಸಿ ನೀರು ಪಡೆದು ಬೆಳೆಗಳಿಗೆ ಹಾಯಿಸಿಕೊಳ್ಳೋಣವೆಂದರೆ ಪಂಪ್‌ಸೆಟ್‌ದಾರರಿಗೂ ಸಕ್ರಿಯವಾಗಿ ವಿದ್ಯುತ್‌ ವ್ಯವಸ್ಥೆ ಮಾಡದೇ ಕೇವಲ ಅಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮನಾಥಪುರ ಪ್ರವಾಸಿ ಕೇಂದ್ರವಾಗಿದ್ದು 24 ಗಂಟೆ ವಿದ್ಯುತ್‌ ವ್ಯವಸ್ಥೆ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಂಕರ್‌ ಎಚ್ಚರಿಸಿದ್ದಾರೆ.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page